PM Kisan Yojana: ಹಣ ಪಡೆಯಲು ಈ ದಾಖಲೆ ನೀಡುವುದು ಕಡ್ಡಾಯ 

ವಂಚನೆಗಳನ್ನು ತಡೆಯುವ ಉದ್ದೇಶದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ ಪಿಎಂ ಕಿಸಾನ್ ಅಡಿಯಲ್ಲಿ ನಿಯಮಗಳನ್ನು ಇತ್ತೀಚೆಗೆ ಬದಲಾಯಿಸಲಾಗಿದೆ.

 ಪಿಎಂ ಕಿಸಾನ್ ಯೋಜನೆಯಡಿ, ನಿರ್ದಿಷ್ಟ ವರ್ಗದ ರೈತರು ಮಾತ್ರ ಪ್ರಯೋಜನಗಳನ್ನು ಪಡೆಯುತ್ತಾರೆ.

ಆದರೆ ಈ ಯೋಜನೆಯಡಿಯಲ್ಲಿ ಹಲವರು ನಕಲಿ ದಾಖಲೆಗಳನ್ನು ನೀಡಿ ವರ್ಷಕ್ಕೆ 6,000 ರುಪಾಯಿಗಳನ್ನು ಪಡೆದಿರುವ ಬಗ್ಗೆ ರಾಜ್ಯಗಳು ವರದಿ ಮಾಡಿದೆ. 

ಈ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯಲು, ಅರ್ಹರಿಗೆ ಮಾತ್ರ ಯೋಜನೆಯ ಹಣ ದೊರೆಯುವಂತೆ ಮಾಡಲು ಹಲವು ಹೊಸ ನಿಯಮಗಳನ್ನು ಜಾರಿ ಮಾಡಿದೆ.

ಯೋಜನೆಯಡಿ ಪ್ರಧಾನಿ ಮೋದಿ ಸರ್ಕಾರವು ರೈತರ ಖಾತೆಗೆ ಇದುವರೆಗೆ 11 ಕಂತುಗಳ ಹಣ ಪಾವತಿಸಿದೆ. ಇದೀಗ 12ನೇ ಕಂತಿನ ಹಣ ಬಿಡುಗಡೆಯಾಗಬೇಕಾಗಿದೆ.

ಆರಂಭದಲ್ಲಿ 5 ಎಕರೆ ಕೃಷಿಯೋಗ್ಯ ಭೂಮಿ ಹೊಂದಿರುವ ರೈತರು ಮಾತ್ರ ಯೋಜನೆಯಡಿ ಹಣ ಪಡೆಯಲು ಅರ್ಹರು ಎಂದು ಪರಿಗಣಿಸಲಾಗಿತ್ತು. 

ಆದರೆ, ಇದೀಗ ಕೇಂದ್ರ ಸರ್ಕಾರ ಈ ನಿಯಮ ತೆಗೆದುಹಾಕಿದ್ದು, 14.5 ಕೋಟಿ ರೈತರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆಯಲಿದ್ದಾರೆ.

ಹೊಸ ನಿಯಮದ ಪ್ರಕಾರ, ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿಸುವಾಗ ಎಲ್ಲಾ ರೈತರು ತಮ್ಮ ಪಡಿತರ ಚೀಟಿ ಮಾಹಿತಿಯನ್ನು ಹಂಚಿಕೊಳ್ಳಬೇಕಾಗುತ್ತದೆ.

 ಯೋಜನೆಗೆ ನೋಂದಾಯಿಸುವಾಗ ನಿಮ್ಮ ಪಡಿತರ ಚೀಟಿಯ ಪ್ರತಿಯನ್ನು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.